ಶ್ರೀ ದೇವರ ಬ್ರಹ್ಮಕಲಶಕ್ಕೆ ಶುಭವನ್ನು ಹಾರಿಸಿದ ಶ್ರೀಯುತ ಆಳ್ವರು

ಖ್ಯಾತ ಉದ್ಯಮಿಗಳೂ, ಸಾಮಾಜಿಕ ಧಾರ್ಮಿಕ ಮುಂದಾಳುಗಳೂ, ಶ್ರೀ ಸೂರ್ಯೇಶ್ವರ ಮಹಿಷಮರ್ದಿನಿ ದೇವಸ್ಥಾನ ಸೇವಾ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಶ್ರೀ ರವೀಂದ್ರ ಆಳ್ವ ಮಲಾರು ಬೀಡು ಇವರನ್ನು ಭೇಟಿ ಮಾಡಿ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶಕ್ಕೆ ಆಹ್ವಾನಿಸಲಾಯಿತು. ಸಂಚಾಲಕರಾದ ಸೇರಾಜೆ ಗೋಪಾಲಕೃಷ್ಣ ಭಟ್, ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ, ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು.
ತುಳುನಾಡಿನ ದೇವಾಲಯ, ದೈವಾರಾಧನೆ, ಪೂರ್ವ ಸಂಪ್ರದಾಯಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಶ್ರೀ ರವೀಂದ್ರ ಆಳ್ವರೊಂದಿಗೆ ಸಂವಾದ ಬಹಳ ಕೌತುಕದ ವಿಚಾರವೇ ಸರಿ.

ಹಿರಿಯರಾದ ದಿ. ಸೇರಾಜೆ ನಾರಾಯಣ ಭಟ್, ದಿ . ಕುರಿಯ ವಿಠಲ ಶಾಸ್ತ್ರಿ ಹಾಗೂ ದಿ. ಮಲಾರು ಬೀಡು ಕಂಪಣ್ಣ ಆಳ್ವರ ಆತ್ಮೀಯ ಸಂಬಂಧಗಳನ್ನು ಶ್ರೀಯುತ ಆಳ್ವರು ನೆನಪಿಸಿಕೊಂಡರೆ, 1975 ಜೂನ್ 21 ರಂದು ನಡೆದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದಲ್ಲಿ ಸುರಿದ ಧಾರಾಕಾರ ಮಳೆಯ ಮಧ್ಯೆ ಮಲಾರುಬೀಡು ಕಂಪಣ್ಣ ಆಳ್ವರು ಹೆಗಲಿಗೆ ಹೆಗಲು ಕೊಟ್ಟು,ಮುಂದೆ ನಿಂತು ನೀಡಿದ ಸಹಕಾರವನ್ನು ಸೇರಾಜೆ ಗೋಪಾಲಕೃಷ್ಣ ಭಟ್ಟರು ಸ್ಮರಿಸಿಕೊಂಡರು.
ಈ ಅವಿನಾವ ಭಾವ ಸಂಬಂಧಗಳ ಪರಂಪರೆಯ ಭಾಗವಾಗಿ ಮಾರ್ಚ್ 30 ರಿಂದ ಏಪ್ರಿಲ್ 6 ರ ವರೆಗೆ ನಡೆಯಲಿರುವ ಶ್ರೀ ದೇವರ ಬ್ರಹ್ಮಕಲಶಕ್ಕೆ ಶುಭವನ್ನು ಹಾರೈಸಿದ ಶ್ರೀಯುತ ಆಳ್ವರು ಸರ್ವ ರೀತಿಯ ಸಹಕಾರದ ಆಶಯವನ್ನು ಹೊಂದಿಲ್ಲ

ಕಾಮೆಂಟ್ ಪೋಸ್ಟ್ ಮಾಡಿ