ದೇವಾಲಯದಲ್ಲಿ ನಡೆಯುವ ಪ್ರಮುಖ ಪರ್ವಗಳು
ದೇವಾಲಯದಲ್ಲಿ ನಡೆಯುವ ಪ್ರಮುಖ ಪರ್ವಗಳು ಮತ್ತು ಸೇವಾ ಸೌಲಭ್ಯಗಳು
- ನಾಗರ ಪಂಚಮಿ: ನಾಗನಿಗೆ ಕ್ಷೀರಾಭಿಷೇಕ ಹಾಗೂ ತಂಬಿಲ
- ಶ್ರೀ ಗಣೇಶ ಚತುರ್ಥಿ : ಬೆಳಗ್ಗೆ ೧೨ ಕಾಯಿ ಗಣಪತಿ ಹೋಮ, ರುದ್ರಾಭಿಷೇಕ, ಪಂಚಾಮೃತಾಭಿಷೇಕ
- ಸಿಂಹ ಮಾಸದಲ್ಲಿ ಪ್ರತಿ ಶನಿವಾರ ಬಲಿವಾಡುಕೂಟ ಹಾಗೂ ಮೂರನೇ ಶನಿವಾರ ಸಾರ್ವಜನಿಕ ಶನೈಶ್ಚರಪೂಜೆ
- ನವ ರಾತ್ರಿ: ಬೆಳಗ್ಗೆ ಗಣಪತಿ ಹವನ (ಮೊದಲ ದಿನ), ಪ್ರತೀ ರಾತ್ರಿ ನವ ರಾತ್ರಿಪೂಜೆ ಹಾಗೂ ಭಜನೆ
ಮಹಾನವಮಿ: ರಾತ್ರಿ ವಿಶೇಷ ಪೂಜೆ, ಅನ್ನಸಂತರ್ಪಣೆ - ದೀಪಾವಳಿ : ಧೂಮಾವತಿ ತಂಬಿಲ
- ಕಾರ್ತಿಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ
- ಉತ್ಥಾನ ದ್ವಾದಶಿಯಂದು ತುಳಸಿ ಪೂಜೆ
- ಮಕರ ಸಂಕ್ರಾಂತಿ : ಸಾರ್ವಜನಿಕ ಸತ್ಯನಾರಾಯಣ ಪೂಜೆ
- ಪೌಷ ಮಾಸ ಶುಕ್ಲ ಪಕ್ಷ ತ್ರಯೋದಶಿಯಂದು ವಾರ್ಷಿಕ ಜಾತ್ರೆ – ಗಣಪತಿ ಹೋಮ, ನವಕಕಲಶಾಭಿಷೇಕ, ನಾಗ ತಂಬಿಲ ಹಾಗೂ ಧೂಮಾವತಿ ತಂಬಿಲ, ರಾತ್ರಿ ಉತ್ಸವ ಬಲಿ ಹಾಗೂ ರಂಗಪೂಜೆ ಚತುರ್ದಶಿಯಂದು ಉತ್ಸವ ಬಲಿ, ಬಟ್ಟಲುಕಾಣಿಕೆ ಹಾಗೂ ರಾಜಾಂಗಣ ಪ್ರಸಾದ, ರಾತ್ರಿ ಧೂಮಾವತಿ ದೈವ, ಕೊರತಿ ದೈವಗಳಿಗೆ ನೇಮ (ಪ್ರತಿವರ್ಷದ ಪಂಚಾಂಗಗಳಿಗೆ ಈ ಪಟ್ಟಿಯನ್ನು ದಿನಾಂಕದೊಂದಿಗೆ ನಮೂದಿಸಲಾಗಿಲ್ಲ.)
- ಮಹಾಶಿವರಾತ್ರಿ : ಬೆಳಗ್ಗೆ ಗಣಪತಿ ಹೋಮ, ರುದ್ರಾಭಿಷೇಕ, ಸೀಯಾಳಾಭಿಷೇಕ, ಬಲಿವಾಡುಕೂಟ ಸಮಾರಾಧನೆ, ರಾತ್ರಿ ಏಕಾದಶ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಶಿವರಾತ್ರಿ ಪೂಜೆ, ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಭಜನಾ ಸೇವೆ
- ವಿಷು: ಬೆಳಗ್ಗೆ ಹಣ್ಣು ಕಾಯಿ ಸಮರ್ಪಣೆ, ಭಜನೆ
- ಪತ್ತನಾಜೆ: ಧೂಮಾವತಿ ತುಂಬಿಲ
ಕಾಮೆಂಟ್ ಪೋಸ್ಟ್ ಮಾಡಿ